PATRIKE

    RAMAKSHATRIYA       

B M NATH'S 

7 Steps

ರಾಮಕ್ಷತ್ರಿಯ ಸಮಾಜದ ಬಡ ಕುಟುಂಬಕ್ಕಾಗಿ ಏಳು ಮೆಟ್ಟಿಲುಗಳು

ಮೊದಲ ಮೆಟ್ಟಿಲು 

ಬದುಕಿಗೆ ಆಸರೆಯಾಗಿದ್ದ ಪತಿಯನ್ನು ಕಳೆದುಕೊಂಡ ಬಡ ರಾಮಕ್ಷತ್ರಿಯ ಮಹಿಳೆಯರಿಗಾಗಿ ಇರುವ ಈ ಯೋಜನೆ "ರಾಮಕ್ಷತ್ರಿಯ ಸಾಂತ್ವನ"ಒಂದು ಸಾವಿರ ರೂಪಾಯಿ ನಗದನ್ನು ಒಳಗೊಂಡಿರುತ್ತದೆ. ಸಂಕಷ್ಟದಲ್ಲಿರುವ ಮಹಿಳೆಯರು ತಮ್ಮ ಹೆಸರು, ಪತಿಯ ಹೆಸರು, ಸ್ಪಷ್ಟ ವಿಳಾಸ, ದೂರವಾಣಿ ಸಂಖ್ಯೆಯೊಂದಿಗೆ ಮಾಹಿತಿಯನ್ನು ರಾಮಕ್ಷತ್ರಿಯ ಕಾರ್ಯಾಲಯ ವಿಳಾಸಕ್ಕೆ ಕಳುಹಿಸಿ ಈ ಯೋಜನೆಯ ಉಪಯೋಗ ಪಡೆಯಬಹುದು.

ಎರಡನೇಯ ಮೆಟ್ಟಿಲು

ರಾಮಕ್ಷತ್ರಿಯ ಸಮಾಜದ ಬಡ ಕುಟುಂಬಕ್ಕೆ ಮೀಸಲಾದ ಈ ಯೋಜನೆ "ರಾಮಕ್ಷತ್ರಿಯ ದಾರಿ ದೀಪ " ಒಂದು ಸಾವಿರ ರೂಪಾಯಿ ನಗದನ್ನು ಒಳಗೊಂಡಿರುತ್ತದೆ. ಸಮಾಜದಲ್ಲಿ ಅಂಗವಿಕಲರು ಹಾಗು ಕಷ್ಟದಲ್ಲಿರುವ ಬಡವರು ತಮ್ಮ ಹೆಸರು, ವಿಳಾಸ ಹಾಗು ದೂರವಾಣಿ ಸಂಖ್ಯೆಯೊಂದಿಗೆ ರಾಮಕ್ಷತ್ರಿಯ ಪತ್ರಿಕೆಯ ಕಾರ್ಯಾಲಯ ವಿಳಾಸಕ್ಕೆ ಮಾಹಿತಿ ತಿಳಿಸಿ ದಾರಿ ದೀಪದಲ್ಲಿ ಬೆಳಕನ್ನು ಕಂಡುಕೊಳ್ಳಬಹುದಾಗಿದೆ.

 

ಮೂರನೇಯ ಮೆಟ್ಟಿಲು

ರಾಮಕ್ಷತ್ರಿಯ ಸಮಾಜದ 10ನೇ ತರಗತಿಗಿಂತ ಮೇಲ್ಪಟ್ಟ ವಿದ್ಯಾರ್ಥಿಗಳಿಗಾಗಿ ಇರುವ ಈ ಯೋಜನೆ "ರಾಮಕ್ಷತ್ರಿಯ ಪ್ರತಿಭಾ ಸ್ಪಂಧನ"ಒಂದು ಸಾವಿರ ರೂಪಾಯಿ ನಗದನ್ನು ಒಳಗೊಂಡಿರುತ್ತದೆ. ಈ ಯೋಜನೆಯಲ್ಲಿ ಪ್ರಯೋಜನ ಪಡೆಯುವ ವಿದ್ಯಾರ್ಥಿಗಳು ತಮ್ಮ ಹೆಸರು, ತಂದೆ-ತಾಯಿಯ ಹೆಸರು, ತಂದೆ-ತಾಯಿಯ ಉದ್ಯೋಗ, ತರಗತಿ, ಕಲಿಯುತ್ತಿರುವ ವಿದ್ಯಾಸಂಸ್ಥೆ ಹಾಗು ತಮ್ಮ ಭಾವಚಿತ್ರದೊಂದಿಗೆ ರಾಮಕ್ಷತ್ರಿಯ ಪತ್ರಿಕೆಯ ಕಾರ್ಯಾಲಯ ವಿಳಾಸಕ್ಕೆ ಮಾಹಿತಿ ಬರೆದು ಯೋಜನೆಯ ಸದುಪಯೋಗ ಪಡೆಯಬಹುದಾಗಿದೆ.

ನಾಲ್ಕನೇಯ ಮೆಟ್ಟಿಲು 

ಪದವಿ ಮತ್ತು ಪದವಿಯ ನಂತರ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗಾಗಿ ಇರುವ ಈ ಯೋಜನೆ "ರಾಮಕ್ಷತ್ರಿಯ ಪ್ರತಿಭಾ ಚೇತನ" ಒಂದು ಸಾವಿರ ರೂಪಾಯಿ ನಗದನ್ನು ಒಳಗೊಂಡಿರುತ್ತದೆ. ಈ ಯೋಜನೆಯ ಪ್ರಯೋಜನ ಪಡೆಯುವ ವಿದ್ಯಾರ್ಥಿಗಳು ತಮ್ಮ ಹೆಸರು, ಸ್ಪಷ್ಟ ವಿಳಾಸ, ತಂದೆ-ತಾಯಿಯ ಹೆಸರು, ತಂದೆ-ತಾಯಿಯ ಉದ್ಯೋಗ, ತರಗತಿ, ಕಲಿಯುತ್ತಿರುವ ವಿದ್ಯಾಸಂಸ್ಥೆಯ ಹೆಸರು ಹಾಗು ತಮ್ಮ ಭಾವಚಿತ್ರದೊಂದಿಗೆ ರಾಮಕ್ಷತ್ರಿಯ ಪತ್ರಿಕೆಯ ಕಾರ್ಯಾಲಯ ವಿಳಾಸಕ್ಕೆ ಮಾಹಿತಿ ತಿಳಿಸಿ ಯೋಜನೆಯ ಸದುಪಯೋಗ ಪಡೆಯಬಹುದಾಗಿದೆ.

 

ಐದನೇಯ ಮೆಟ್ಟಿಲು 

ಒಂದರಿಂದ ಹತ್ತನೇ ತರಗತಿಯ ವಿದ್ಯಾರ್ಥಿಗಳಿಗಾಗಿ (500ರೂx2=1000) ತಲಾ ಇಬ್ಬರು ವಿದ್ಯಾರ್ಥಿಗಳಿಗಂತೆ ನೀಡುವ ಈ ಯೋಜನೆ "ರಾಮಕ್ಷತ್ರಿಯ ಪ್ರತಿಭಾ ಪುರಸ್ಕಾರ" ಪ್ರಯೋಜನ ಪಡೆಯುವ ವಿದ್ಯಾರ್ಥಿಗಳು ತಮ್ಮ ಭಾವಚಿತ್ರದೊಂದಿಗೆ ಹೆಸರು, ವಿಳಾಸ, ತರಗತಿ, ತಂದೆ-ತಾಯಿಯ ಹೆಸರು, ತಂದೆ-ತಾಯಿಯ ಉದ್ಯೋಗ, ಶಾಲೆಯ ಹೆಸರನ್ನು ಒಳಗೊಂಡ ಮಾಹಿತಿಯನ್ನು ರಾಮಕ್ಷತ್ರಿಯ ಪತ್ರಿಕೆಯ ಕಾರ್ಯಾಲಯ ವಿಳಾಸಕ್ಕೆ ಮಾಹಿತಿ ತಿಳಿಸಿ ಯೋಜನೆಯ ಸದುಪಯೋಗ ಪಡೆಯಬಹುದಾಗಿದೆ.

ಆರನೇಯ ಮೆಟ್ಟಿಲು

ರಾಮಕ್ಷತ್ರಿಯ ಸಮಾಜದ ಬಡ ಕುಟುಂಬಕ್ಕಾಗಿ ಇರುವ ಈ ಯೋಜನೆ "ರಾಮಕ್ಷತ್ರಿಯ ಭಾಗ್ಯದ ಬಾಗಿಲು".500 ನಗದನ್ನು ಒಳಗೊಂಡಿರುತ್ತದೆ. ಆರ್ಥಿಕವಾಗಿ ಕಷ್ಟದಲ್ಲಿರುವವರಿಗೆ ಈ ಯೋಜನೆ ಅವರ ಭಾಗ್ಯದ ಬಾಗಿಲುಗಳಾಗಲಿ ಎನ್ನುವುದೇ ನಮ್ಮ ಆಶಯ. ಈ ಯೋಜನೆಯ ಪ್ರಯೋಜನ ಪಡೆಯುವವರು ತಮ್ಮ ವಿಳಾಸದೊಂದಿಗೆ ರಾಮಕ್ಷತ್ರಿಯ ಕಾರ್ಯಾಲಯ ವಿಳಾಸಕ್ಕೆ ಮಾಹಿತಿ ಕಳುಹಿಸಿ, ಯೋಜನೆಯ ಸದುಪಯೋಗ ಪದೆಯಬಹುದಾಗಿದೆ.

ಏಳನೇಯ ಮೆಟ್ಟಿಲು

ಕಲೆ, ಸಾಹಿತ್ಯ, ಕ್ರೀಡೆ, ಸಂಗೀತ ಮತ್ತು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಬಹುಮುಖ ಪ್ರತಿಭೆಯನ್ನು ಹೊಂದಿದ ಪ್ರತಿಭಾವಂತರನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ಪ್ರತಿಭಾವಂತರ ಕಿರು ಪರಿಚಯ ಮತ್ತು ಒಂದು ಸಾವಿರ ರೂಪಾಯಿ ನಗದು ಪುರಸ್ಕಾರ. "ರಾಮಕ್ಷತ್ರಿಯ ಬಹುಮುಖ ಪ್ರತಿಭೆ", ಪ್ರತಿಭಾವಂತರು ತಮ್ಮ ಕಿರು ಪರಿಚಯ ಹಾಗು ಭಾವ-ಚಿತ್ರದೊಂದಿಗೆ ರಾಮಕ್ಷತ್ರಿಯ ಕಾರ್ಯಾಲಯ ವಿಳಾಸಕ್ಕೆ ಮಾಹಿತಿ ಬರೆದು ಕಳುಹಿಸಿರಿ.