ರಾಮ ಕ್ಷತ್ರಿಯರ ಏಕೈಕ ಮಾಸ ಪತ್ರಿಕೆ "ರಾಮಕ್ಷತ್ರಿಯ" 9ನೇ ವರ್ಷದ ಸಂಭ್ರಮ ವಿಶ್ವದಾದ್ಯಂತ ಪ್ರಸರಣ
ಬಿ.ಎಂ.ನಾಥ್ ಬೈಂದೂರು ಸಂಪಾದಕತ್ವದಲ್ಲಿ...
ರಾಮ ಕ್ಷತ್ರಿಯರ ಏಕೈಕ ಮಾಸ ಪತ್ರಿಕೆ "ರಾಮಕ್ಷತ್ರಿಯ" 9ನೇ ವರ್ಷದ ಸಂಭ್ರಮ ವಿಶ್ವದಾದ್ಯಂತ ಪ್ರಸರಣ
ಬಿ.ಎಂ.ನಾಥ್ ಬೈಂದೂರು ಸಂಪಾದಕತ್ವದಲ್ಲಿ...
ಸಮಕ್ಷಮ
ದುಡಿಮೆಯ ಒತ್ತಡ, ಬದುಕಿನ ಶೈಲಿಯಲ್ಲಿನ ಅನಿವಾರ್ಯ ಬದಲಾವಣೆಯಿಂದಾಗಿ ನಾವು, ನಮ್ಮವರು -ಭಾವ ಸಮ್ಮಿಲನ ಅಭಾವವಾಗುತ್ತಿದೆ. "ನಾವಿಬ್ಬರು-ನಮಗಿಬ್ಬರು" ಜೀವನವಾಗುತ್ತಿದೆ. ಕೂಡಿ ಬಾಳಿದರೆ ಸ್ವರ್ಗ ಸುಖ ಅರ್ಥ ಕಳೆದುಕೊಳ್ಳುತ್ತಿದೆ. ಕುಟುಂಬ ಸಮಾಜದ ಮೌಲ್ಯಯಾಂತ್ರಿಕೃತ ಬದುಕಿನಲ್ಲಿ ನೇಪಥ್ಯಕ್ಕೆ ಸರಿಯುತ್ತಿದೆ. ಸ್ವಾತಂತ್ರ್ಯದ ಈ ಆರು ದಶಕಗಳಲ್ಲಿ ಸಮಾಜದ ಸಂಪರ್ಕ ಹಂತ ಹಂತವಾಗಿ ಶಿಥಿಲವಾಗುತ್ತಾ ಬಂದಿರುವುದು ನಾವು-ನೀವು ಕಂಡ ಸತ್ಯ ಬೆಳವಣಿಗೆ. ಸಮಾಜದ ಸಂರಕ್ಷಣೆ, ಸಮಾಜ-ಸಮಾಚಾರ, ಗುರುತು, ರೀತಿ-ರಿವಾಜುಗಳು, ಮಾನವೀಯ ಸಂಬಂಧಗಳು, ಸಮಾಜ-ಸಮುದಾಯಕ್ಕಿಂತ "ತಾನು ತನ್ನ ಅಸ್ತಿತ್ವ" ವೇಗವಾಗಿ ಮುನ್ನುಗ್ಗುತ್ತಿದೆ. ಆಧುನಿಕ ವಿದ್ಯಾಭ್ಯಾಸ, ಮುಮ್ಮಿ ಡ್ಯಾಡಿ ಸಂಸ್ಕ್ರತಿ ಇದಕ್ಕೆ ಪುಷ್ಠಿ ನೀಡುತ್ತಿದೆ. ಇದರಿಂದ ಭಾವನಾತ್ಮಕ ಸಂಬಂಧಗಳು ದೂರ ಸರಿಯುತ್ತಿದೆ. ಎಲ್ಲರೊಡನೆ ಸಹಜವಾಗಿ ಬೆರೆವ ಸಾಮಾಜಿಕ ಬದುಕು ಬೇಡವಾಗುತ್ತಿದೆ. ಕೆಲವು ತಂದೆ-ತಾಯಿಯರಂತು ಸಮಾಜದ ಮುಖ್ಯ ವಾಹಿನಿಗೆ ಬರುವುದೇ ತಮ್ಮ ಮಕ್ಕಳು ಪ್ರಬುದ್ಧಕ್ಕೆ ಬಂದ ಮೇಲೆ. ಅಲ್ಲಿಯ ತನಕ ಅವರಿಗೆ ಸಮಾಜ ಬೇಡ, ಸಮಾಜದ ಬದುಕು ಬೇಡ, ಕೂಡಿ ಸಂಭ್ರಮಿಸುವ ಸಂದರ್ಭಗಳು ಬೇಡ.
ವೇಗವಾಗಿ ಬದಲಾಗುತ್ತಿರುವ ಸಮಾಜದಲ್ಲಿ ಬದುಕು ವ್ಯವಹಾರಿಕವಾಗಿ ಭಾವನೆಗಳು ಸೊರಗುತ್ತಿದ್ದ ಸಂದರ್ಭದಲ್ಲಿ ಮೆಲ್ಲನೆ ಹೆಜ್ಜೆಯಿಟ್ಟು ಬಂದದ್ದು ರಾಮಕ್ಷತ್ರಿಯ ಪತ್ರಿಕೆ. ಸಮಾಜದ ಸಂಪರ್ಕಕ್ಕಾಗಿ ಮಹೋನ್ನತ ಸಾಧನೆ, ಸಾಧಿಸಿದ ಫಲಗಳು ಎಲ್ಲವು ಈ 8 ವರ್ಷಗಳಲ್ಲಿ ನಿಖರವಾಗಿ ತಮಗೆ ತಿಳಿದಿದೆ. ಪತ್ರಿಕೆಯಲ್ಲಿ ವಿವಾಹ ಮಾಹಿತಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಎಲ್ಲಾ ಮಾಹಿತಿಯನ್ನು ಉಚಿತವಾಗಿಯೇ ಪ್ರಕಟಿಸಲಾಗಿದೆ. ರಾಮಕ್ಷತ್ರಿಯ ಪತ್ರಿಕೆಯ 5 ಪುಟಗಳನ್ನು ವಧು-ವರರ ವೇದಿಕೆಗಾಗಿ ಮೀಸಲಿಡಲಾಗಿದೆ. ಕಳೆದ 9 ವರ್ಷಗಳಲ್ಲಿ 200 ವಿವಾಹಗಳು ಪತ್ರಿಕೆಯ ಸಂಪರ್ಕದಿಂದ ಆಗಿರುವುದು ಪತ್ರಿಕೆಯ ಸಂಭ್ರಮಕ್ಕೆ ಕಾರಣವಾಗಿದೆ. ಇದರ ಫಲವಾಗಿ ಎಲ್ಲೆಡೆ ಖುಷಿಯ ಅಲೆ ಕಂಡುಬಂದಿದೆ.
ನಮ್ಮ ಮನಸ್ಸು ದೇವರ ಕೊಡುಗೆ. ಮನಸ್ಸನ್ನು ನಿಯಂತ್ರಿಸಿ ಸತ್ಕಾರ್ಯಗಳಿಗಾಗಿ ಸಾಧನೆ ಮಾಡಿದರೆ ಅಂತಹ ಸಾಧನೆಗೆ ಭಗವಂತನ ಕೃಪೆ ಇರುತ್ತದೆ. ಸಾಧನೆಯಿಂದ ನರನು ನಾರಾಯಣನಾಗುತ್ತಾನೆ. ಸಾಧನೆಗಳು ಶ್ರಮದಿಂದ ಸಿದ್ಧಿಸುತ್ತವೆಯೇ ಹೊರತು, ಕೈಕಟ್ಟಿ ಕುಳಿತುಕೊಳ್ಳುವುದರಿಂದಲ್ಲ. ಹಾಗಾಗಿಯೇ ಕಾಯಕವೇ ಕೈಲಾಸ ಇಂದಿಗೂ ಪ್ರಸ್ತುತ.
ನಿಮ್ಮ ಸಹಕಾರ-ಪ್ರೋತ್ಸಾಹ ನಿರಂತರವಾಗಿರಲಿ.
ಸುಖ-ದುಃಖಗಳಲ್ಲಿ ಸಮನಾದ ಭಾವನೆಯುಳ್ಳವರೇ ಬಂಧುಗಳು-ಕಷ್ಟ ಕಾಲದಲ್ಲಿ ಮುಖ ತಿರುಗಿಸಿಕೊಂಡು ಹೋಗುವವರು ಯಮದೂತರು. ಯಮದೂತರು ಆಗುವುದು ಬೇಡ, ಬಂಧುಗಳಾಗಿ ಬಾಳೋಣ.

CONTENTS OF RAMAKSHATRIYA PATRIKE
- PUNYA KSHETRA MALIKE
- QUIZ
- SANNA KATHE
- SANNA KAVANAGALU
- NUDIMUTTUGALU
- HASYA CHATAKEGALU
- HASYA LEKHANAGALU
- VADU-VARA ANVESHANE
- TARA PHALA
- TINGALA PANCHANGA
- PADABANDHA
- SANGHA SAMSTHEGALA VARADHI